SATHEE: ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಿದ ಯುಜಿಸಿ, ಬಿಡುಗಡೆಯಾಯ್ತು ಹೊಸ ಆ್ಯಪ್​

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಹೊಸ ಆ್ಯಪ್​ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್​ ಬಳಸಿ ನೀವು ಅಭ್ಯಾಸ ಮಾಡಬಹುದು.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (UGC) ಮುಖ್ಯಸ್ಥ ಎಂ ಜಗದೇಶ್ ಕುಮಾರ್ ಅವರು ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾರತೀಯ ವಿದ್ಯಾರ್ಥಿಗಳಿಗೆ ಸ್ವಯಂ ಮೌಲ್ಯಮಾಪನ ವೇದಿಕೆಯನ್ನು ಆ್ಯಪ್​ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ಹೊಸ ವೇದಿಕೆಯ ಗುರಿಯು ಭಾರತೀಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳಿಗೆ ತಯಾರಾಗಲು ಸ್ವಯಂ ಸಂವಾದಾತ್ಮಕ ಕಲಿಕೆ ಮತ್ತು ಮೌಲ್ಯಮಾಪನ ವೇದಿಕೆಯ ಅವಕಾಶವನ್ನು ಒದಗಿಸುವುದಾಗಿದೆ.

SATHEE ಪ್ಲಾಟ್‌ಫಾರ್ಮ್ “ವಿದ್ಯಾರ್ಥಿಗಳಿಗೆ ದುಬಾರಿ ಪ್ರವೇಶ ಪರೀಕ್ಷೆಯ ಮಾರ್ಗದರ್ಶನ ಮತ್ತು ತರಬೇತಿಯನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಹಾಯವಾಗುವ ರೀತಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಈ ಯೋಜನೆಯನ್ನು ಜಾರಿಗೆ ತರುವ ಕುರಿತು ಯುಜಿಸಿ ಮುಖ್ಯಸ್ಥ ಎಂ ಜಗದೇಶ್ ಟ್ವೀಟ್​​ ಕೂಡಾ ಮಾಡಿದ್ದರು ಈ ಆ್ಯಪ್​ ಇಂದು ಬಿಡುಗಡೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.

SATHEE ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಸೂಚಿಸುವ ಒಂದು ಸೌಲಭ್ಯವಾಗಿದೆ. ಯಾವ ವಿಷಯ ಕಲಿಯಬೇಕು ಎಂಬ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಲು ಇದು ತುಂಬಾ ಸಹಾಯಕವಾಗಿದೆ.

ಯಾವ ವಿಷಯ ಕಠಿಣ ಎನಿಸುತ್ತದೆ ಎಂದು ತಿಳಿದು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀವು ಪಡೆಯಬಹುದು. ಇದರಲ್ಲಿ ವಿಡಿಯೋ ಕ್ಲಾಸ್​​ಗಳು ಸಹ ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಕ್ರಮ ಕೈಗೊಳ್ಳಲಿದ್ದಾರೆ.

ಆದ್ದರಿಂದ ಅವರು IIT ಮತ್ತು IISc ಅಧ್ಯಾಪಕರು ಸಿದ್ಧಪಡಿಸಿದ ವೀಡಿಯೊಗಳನ್ನು ನೋಡುವ ಮೂಲಕ ಯಾವುದೇ ಪರೀಕ್ಷೆಗಳನ್ನ ಬೇಕಾದರು ಎದುರಿಸುತ್ತೇವೆ ಎಂಬ ಧೈರ್ಯ ಪಡೆಯುತ್ತಾರೆ. ಹೆಚ್ಚಿನ ಆತ್ಮವಿಶ್ವಾಸ ಹೊಂದುತ್ತಾರೆ